ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯಕ್ಕೆ ಸುಸ್ವಾಗತ

ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯವು 1987-88 ನೇ ಸಾಲಿನಲ್ಲಿ 100 ವಿದ್ಯಾರ್ಥಿಗಳ ಪ್ರವೇಶದೊಂದಿಗೆ ಪ್ರಾರಂಭವಾಯಿತು.ಆರಂಭದಲ್ಲಿ ಪ್ರತಿಷ್ಟಿತ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಂಯೋಜನೆಗೊಂಡು ನಂತರ ಕುವೆಂಪು ವಿಶ್ವವಿದ್ಯಾನಿಲಯ (ಶಂಕರಘಟ್ಟ) ಕ್ಕೆ ಸಂಯೋಜನೆಗೊಂಡಿತು. ಎನ್.ಸಿ.ಟಿ.ಇ ಸ್ಥಾಪನೆಯಾದ ನಂತರ 1996-97 ರಲ್ಲಿ ಮಾನ್ಯತೆ ಪಡೆದುಕೊಂಡು (ಸಂಖ್ಯೆ: ಎಸ್.ಆರ್.ಓ-96/ಮಾನ್ಯತೆ/1994, ದಿನಾಂಕ: 29.10.1996) ತರುವಾಯ ನಿರಂತರವಾಗಿಮಾನ್ಯತೆ ಪಡೆಯುತ್ತಾ ಬಂದಿದೆ. 2010-11 ರಲ್ಲಿದಾವಣಗೆರೆ ವಿಶ್ವವಿದ್ಯಾನಿಂಲಯದ ಸ್ಥಾಪನೆಯಾದ ನಂತರ, ಈ ವಿಶ್ವವಿದ್ಯಾನಿಲಯಕ್ಕೆ ಸಂಯೋಜನೆಗೊಂಡಿದೆ. ನಮ್ಮಕಾಲೇಜು ದಿನಾಂಕ: 10.12.2010 ರಿಂದಕರ್ನಾಟಕ ಸರ್ಕಾರದಿಂದ ವೇತನಾನುದಾನಕ್ಕೆ ಒಳಪಟ್ಟಿರುತ್ತದೆ.

ಕಾಲೇಜು ಪ್ರಾರಂಭವಾದ ದಿನದಿಂದಲೂ, ಆಭಿವೃದ್ಧಿ ಹೊಂದುತ್ತಾಉತ್ತಮವಾದ ಫಲಿತಾಂಶ ಮತ್ತು ಶೈಕ್ಷಣಿಕ ಸಾಧನೆಯನ್ನು ಮಾಡಿದೆ.ಬಹಳಷ್ಟು ಬಾರಿ ಶೇ.100 ರಷ್ಟು ಫಲಿತಾಂಶ ದಾಖಲಿಸಿದೆ.ಪ್ರಸ್ತುತಕಾಲೇಜುಎಲ್ಲಾ ಮೂಲಭೂತ ಸೌಲಭ್ಯಗಳನ್ನೊಳಗೊಂಡ ಸುಂದರವಾದಕಟ್ಟಡದಲ್ಲಿ ನಡೆಯುತ್ತಿದೆ.ಸಾಕಷ್ಟು ಸಂಖ್ಯೆಯತರಗತಿ ಕೊಠಡಿಗಳನ್ನು ಒಳಗೊಂಡಿದೆ. ವಿಜ್ಞಾನ, ಮನೋವಿಜ್ಞಾನ, ಗಣಕಯಂತ್ರ ಮತ್ತುತಂತ್ರಜ್ಞಾನ ಪ್ರಯೋಗಾಲಯಗಳು ಸುಸಜ್ಜಿತವಾಗಿವೆ. ಗ್ರಂಥಾಲಯವುಉತ್ತಮ ಸಂಖ್ಯೆಯಗುಣಮಟ್ಟದ ಪುಸ್ತಕಗಳನ್ನು ಹೊಂದಿದೆ. ಪ್ರಾಂಶುಪಾಲರು ಮತ್ತುಅನುಭವಿ ಪ್ರಾಧ್ಯಾಪಕರುಗಳು ಸಂಸ್ಥೆಗೆ ಕಳಶಪ್ರಾಂiÀiರಾಗಿದ್ದಾರೆ.




ಲಭ್ಯವಿರುವ ಕೋರ್ಸ್ ಗಳು
ಶಿಕ್ಷಣದಲ್ಲಿ ಸ್ನಾತಕ ಪದವಿ (ಬಿ.ಇಡಿ) - ನಾಲ್ಕು ಸೆಮಿಸ್ಟರ್‌ಗಳನ್ನು ಒಳಗೊಂಡ ಎರಡು ವರ್ಷದ ಅವಧಿ. ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ಸಂಯೋಜನೆಗೊಂಡಿದ್ದು, ಎನ್.ಸಿ.ಟಿ.ಇ ಮಾನ್ಯತೆ ಪಡೆದಿದೆ.